ಮಿಸ್ಟರ್ ಡ್ಯೂಪ್ಲಿಕೇಟ್ 2011 ರ ರೊಮ್ಯಾನ್ಸ್ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಇಂಜುಧನ್ ಖಾನ್ ಮುಖ್ಯ ನಾಯಕಿ. ಈ ಚಿತ್ರವನ್ನು ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ. ಮನೋ ಮೂರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು. ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕಶ್ಯಪ್ ದಾಕೋಜು ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು 2001 ರ ಆರ್. ಮಾಧವನ್, ಅಬ್ಬಾಸ್ ಮತ್ತು ರೀಮಾ ಸೇನ್ ನಟಿಸಿದ ತಮಿಳಿನ ಹಿಟ್ ಮಿನ್ನಲೆ ಚಿತ್ರದ ರಿಮೇಕ್ ಆಗಿದೆ . == ಪಾತ್ರವರ್ಗ == ದಿಗಂತ್ ಶೀತಲ್ ಇಂಜುಧನ್ ಖಾನ್ ಪ್ರಜ್ವಲ್ ದೇವರಾಜ್ ದೇವರಾಜ್ ರಮೇಶ್ ಭಟ್ ಸುಧಾ ಬೆಳವಾಡಿ ಆನಂದ್ ಸುಷ್ಮಾ == ಧ್ವನಿಮುದ್ರಿಕೆ == ಜಯಂತ್ ಕಾಯ್ಕಿಣಿ ಮತ್ತು ಕವಿರಾಜ್ ಅವರ ಸಾಹಿತ್ಯಕ್ಕೆ ಮನೋ ಮೂರ್ತಿ ರಾಗ ಸಂಯೋಜಿಸಿದ್ದಾರೆ.{ == ಉಲ್ಲೇಖಗಳು ==